ಜೀವ ವಿಕಾಸವಾದ (ಅಥವ ವಿಕಾಸವಾದ) ಆಧುನಿಕ ಜೀವ ವಿಜ್ಞಾನದ ಬುನಾದಿ. ಈ ವಾದವನ್ನು ಮೊದಲ ಬಾರಿಗೆ ೧೮೫೮ರಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಪ್ರೆಡ್ ವಾಲೇಸ್ ಮಂಡಿಸಿದರು.ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗು ಅಳಿದುಹೋಗಿರುವ ಜೀವ ಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವವೆಂದು ವಿವರಣೆ ಈ ವಾದದ ಸಾರಾಂಶ. == ಜೀವವಿಕಾಸ- ಅಂಕಣದಲ್ಲಿ == 370 ಕೋಟಿ ವರ್ಷಗಳ ಹಿಂದೆಯೇ ಜೀವ ಅಸ್ತಿತ್ವ :ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದು’ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆ ಕಾಲದಲ್ಲಿಯೇ ಭೂಮಿಯಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಇವು ಸಾಕ್ಷ್ಯವನ್ನು ನೀಡಿವೆ. ಇಷ್ಟು ಹಳೆಯದಾದ ಪಳೆಯುಳಿಕೆಗಳು ಪತ್ತೆಯಾಗುತ್ತಿರುವುದು ಇದೇ ಮೊದಲು. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದ 22 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆಗಳು, ಇದುವರೆಗೆ ಭೂಮಿ ಮೇಲೆ ಕಂಡು ಬಂದಿದ್ದ ಅತ್ಯಂತ ಹಳೆಯ ಪಳೆಯುಳಿಕೆಯಾಗಿದ್ದವು’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ವೊಲ್ಲೊಂಗಾಂಗ್‌ ವಿಶ್ವವಿದ್ಯಾಲಯದ ಅಲೆನ್‌ ನಟ್‌ಮನ್‌ ಹೇಳಿದ್ದಾರೆ. 'ಭೂಮಿಯ ಆರಂಭ ಕಾಲದ ಜೀವ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲು ಈ ಪಳೆಯುಳಿಕೆಗಳು ನೆರವಾಗಲಿವೆ. ಜೊತೆಗೆ, ಮಂಗಳಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಕುರಿತ ನಮ್ಮ ಗ್ರಹಿಕೆಯ ಮೇಲೂ ಇವುಗಳು ಪ್ರಭಾವ ಬೀರಲಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿ ಆರಂಭದ ಕಾಲದಿಂದಲೂ ಇಲ್ಲಿ ಜೀವಿಗಳು ನೆಲೆಸಿವೆ ಎಂಬುದಕ್ಕೆ ಪುರಾವೆಗಳನ್ನು ಈ ಆವಿಷ್ಕಾರ ನೀಡಿದೆ. ಭೂಮಿಯ ಇತಿಹಾಸದ ಬಗ್ಗೆ ಪ್ರಸ್ತಾಪವಾದಾಗಲೆಲ್ಲಾ ಏಕಕೋಶ ಜೀವಿಗಳಿಂದ ಜೀವಿಯ ಉಗಮವಾಗಿರುವ ಬಗ್ಗೆ ಚರ್ಚೆಯಾಗುತ್ತದೆ. ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳು ಸೂಕ್ಷ್ಮಾಣುಗಳ ಸಮುದಾಯದಿಂದಾಗಿ ಉಂಟಾಗಿರುವ ಪದರಗಳನ್ನೊಳಗೊಂಡ ಶಿಲಾ ರಚನೆಗಳು. ಇವುಗಳು ಪುರಾತನ ಜೀವಿಗಳ ಅಸ್ತಿತ್ವದ ಬಗ್ಗೆ ಸಾಕ್ಷ್ಯಗಳನ್ನು ನೀಡುವುದರ ಜೊತೆಗೆ, ಆ ಕಾಲದ ಸಂಕೀರ್ಣ ಪರಿಸರ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ನೀಡುತ್ತವೆ’ ಎಂದು ನಟ್‌ಮನ್‌ ವ್ಯಾಖ್ಯಾನಿಸಿದ್ದಾರೆ. '370 ಕೋಟಿ ವರ್ಷಗಳ ಹಿಂದೆಯೇ ವಿಭಿನ್ನವಾದ ಸೂಕ್ಷ್ಮಾಣು ಜೀವಿಗಳೂ ಭೂಮಿಯಲ್ಲಿದ್ದವು ಎಂಬುದನ್ನು ಇದು ತೋರಿಸುತ್ತದೆ’ ಎಂದು ವಿವರಿಸಿದ್ದಾರೆ. ‘ಭೂಮಿ ಸೃಷ್ಟಿಯಾದ ಕೆಲವು ಕೋಟಿ ವರ್ಷಗಳಲ್ಲೇ ಜೀವಿಗಳ ಉಗಮವಾಗಿದೆ ಎಂಬುದನ್ನು ಈ ವೈವಿಧ್ಯವು ಪ್ರತಿಪಾದಿಸುತ್ತದೆ’ ಎಂದು ವಿಶ್ಲೇಷಿಸಿದ್ದಾರೆ. ಈ ಅಧ್ಯಯನವು ಭೂಮಿಯ ಜೀವ ಇತಿಹಾಸಕ್ಕೆ ಹೊಸ ದೃಷ್ಟಿಕೋನ ನೀಡಿದೆ ಎಂದು ಆಸ್ಟ್ರೇಲಿಯನ್‌ ನ್ಯಾಷನಲ್‌ ಯೂನಿವರ್ಸಿಟಿಯ (ಎಎನ್‌ಯು) ಸಹಾಯಕ ಪ್ರಾಧ್ಯಾಪಕಿ ವಿಕ್ಕಿ ಬೆನೆಟ್‌ ಹೇಳಿದ್ದಾರೆ. ‘ಭೂಮಿಯ ಆದಿ ಕಾಲದಲ್ಲಿದ್ದ ಜೀವಿಗಳ ಬಗ್ಗೆ ಇದುವರೆಗೂ ವದಂತಿಗಳೇ ಹರಿದಾಡುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ’ ಎಂದಿದ್ದಾರೆ. === ಪಳೆಯುಳಿಕೆ ಪತ್ತೆಯಾದ ಸ್ಥಳ === ಹಿಮಚ್ಛಾದಿತ ಗ್ರೀನ್‌ಲ್ಯಾಂಡ್‌ನ ಅಂಚಿನಲ್ಲಿರುವ ಇಸುವಾ ಹಸಿರುಶಿಲಾ ಪಟ್ಟಿಯಲ್ಲಿರುವ ಅತ್ಯಂತ ಹಳೆಯ ಸಂಚಿತ ಶಿಲೆಗಳ ನಡುವೆ ಇದ್ದ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು ವೊಲ್ಲೊಂಗಾಂಗ್‌ ವಿಶ್ವವಿದ್ಯಾಲಯದ (ಯುಒಡಬ್ಲ್ಯು) ಅಧ್ಯಯನಕಾರರ ತಂಡ ಪತ್ತೆ ಹಚ್ಚಿದೆ. ಇವುಗಳು ಹೆಚ್ಚೇನು ಆಳವಿಲ್ಲದ ಸಮುದ್ರದಡಿ ಇದ್ದವು. ಸಮುದ್ರದ ಮೇಲ್ಮೈ ಮಂಜುಗಡ್ಡೆಯ ಭಾರಿ ತುಂಡು ಇತ್ತೀಚೆಗೆ ಕರಗಿದಾಗ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳು ಹೊರಜಗತ್ತಿಗೆ ತೆರೆದುಕೊಂಡಿವೆ. ಸ್ಟ್ರೊಮಾಟೊಲೈಟ್‌ ಎನ್ನುವುದು ಒಂದು ಸೂಕ್ಷ್ಮಾಣು ಜೀವಿ, ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ (ಸಯನೊಬ್ಯಾಕ್ಟೀರಿಯಾ) ಗುಂಪುಗಳಿಂದ ಸೃಷ್ಟಿಯಾಗಿರುವ, ಪದರಗಳನ್ನು ಹೊಂದಿರುವ ಶಿಲಾರಚನೆ. ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದು’ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. == ಜೀವ ವಿಕಾಸ == == ಜೀವ ವಿಕಾಸ-ವೃಕ್ಷ-ಅಂಕಣದಲ್ಲಿ-ಸಂಕ್ಷಿಪ್ತ == == ಭೂಗೋಲ ಜೀವ ವಿಕಾಸದ ಕಾಲಮಾನ == - 4.54 (4.54 × 109 ± 1%- / ಅಂಕಿಗಳ ಮುಂದೆ -' ವರ್ಷಗಳ ಹಿಂದೆ ' , ಎಂದು ಓದಿಕೊಳ್ಳಿ ಅರ್ಚಾಯಿನ್ ಮಹಾಯುಗ ಸೂರ್ಯನಿಗೆ ೪೬೫,೦೦,೦೦,೦೦೦ ಶೇ.±೧(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ ಸೌರ ವ್ಯೂಹದ ಉದಯ ಕಾಲ - ಭೂಮಿಯ ಪ್ರಾಯ ೪೫೪ ಕೋಟಿ ವರ್ಷ (೧% ವ್ಯತ್ಯಾಸಕ್ಕೆ ಅವಕಾಶ ವಿದೆ) ಸೂರ್ಯನ ಜನನ -> == ಸೌರವ್ಯೂಹದ ಜನನ == ಸೂರ್ಯನಿಗೆ ೪೬೫,೦೦,೦೦,೦೦೦ ಶೇ.±೧(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು. ಪಾತಾಲ ಮಹಾ ಯುಗ ಭೂಮಿಯ ಜನನದ ನಂತರದ ಕಾಲವನ್ನು ಮುಖ್ಯವಾಗಿ ಮೂರು ಮಹಾ ಯುಗಗಳಾಗಿ ವಿಂಗಡಿಸಿದೆ ೧)ಪಾತಾಲ ಮಹಾ ಯುಗ ; ೨)ಆದಿ ಜೀವ ಮಹಾ ಯುಗ ೩) ಜೀವ ವಿಕಾಸ ಮಹಾಯುಗ ಇದನ್ನು ಫಲ ಪುಷ್ಪ ಮಹಾಯುಗ ಎಂದೂ ಕರೆಯುವರು. ಅದರಲ್ಲಿ ಮತ್ತೆ ವಿಭಾಗಗಳು - : - - -- ಆದಿ ಜೀವ ಪ್ರೊಕೋರೈಟ್ -> ೧)ಪಾತಾಲ ಮಹಾಯುಗದಲ್ಲಿ ಯುಗಗಳು ೧.ಅತಿಪ್ರಾಚೀನ ೨.ಆದಿ/ಮಧ್ಯ ಉಷ್ಣ ಯುಗ. ೩. ಅಂತ್ಯ ಉಷ್ಣ ಯುಗ. == ಪಾತಾಲ ಮಹಾಯುಗ == ಈ ರೀತಿಯಲ್ಲೂ ವಿಂಗಡಿಸಿದೆ (ಯುಗ ವಿಂಗಡಣೆಯ ಮತ್ತು ಜೀವ ವಿಕಾಸದ ಕಾಲ ಗಣನೆಯ ವಿಚಾರದಲ್ಲಿ ಅಭಿಪ್ರಾಯ ಬೇಧಗಳಿವೆ)) ಪಾತಾಳಯುಗ -(ಉಷ್ಣ ಯುಗದ ಅಂತ್ಯ ಕಾಲ) ೩೦೦,೦೦,೦೦,೦೦೦ ಅರಂಭಿಕ ಏಕಾಣು ಜೀವ ಕೋಶಗಳು ಕಾಣಿಸಿಕೊಂಡವು. ಪೂರ್ವ ಪ್ರಾಚೀನ ಯುಗ -೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು ಮಧ್ಯ ಪ್ರಾಚೀನ -೧೬೦,೦೦,೦೦,೦೦೦ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು == ಆದಿ ಉಷ್ಣಯುಗ == ೧.ಅತಿಪ್ರಾಚೀನ (ಹೇಡಿಯಾನ್ ಎಂದರೆ ನರಕದ ಯುಗ) ಅತಿಉಷ್ಣ ಯುಗ - ಭೂಮಿ (೪೬೫ ಕೋಟಿ ವರ್ಷಗಳ ಹಿಂದೆ) ಅತಿಪ್ರಾಚೀನ (4600ಮಿಲಿಯನ್ ವರ್ಷಗಳ ಹಿಂದೆ) ಬಾಲ ಸೂರ್ಯನ ಸುತ್ತುತ್ತಿರುವ ಧೂಳಿನ ಕಣಗಳು ಸಾಂದ್ರತೆ ಯಿಂದ ಒಟ್ಟುಗೂಡಿ ಭೂಮಿಯ ಉದಯವಾಯಿತು. ಆಗಲೇ ಜೀವ ಆಧಾರವಾದ ಸಂಕೀರ್ಣ ಸಂಯುಕ್ತ ಅಣುಗಳ ರಚನೆಯಾಗಿರಬೇಕು == ಮಧ್ಯ ಉಷ್ಣಯುಗ == ೨ ಅತಿಉಷ್ಣ - ೪೦೦,೦೦,೦೦,೦೦೦ ಮಧ್ಯ ಉಷ್ಣ ಯುಗ ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ ; ತಿತಾನೆಸ್-ಹೆಲೋಯಿಸ್,ಸೆಲೀನೆ ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ) == ಅಂತ್ಯ ಉಷ್ಣಯುಗ == ಸುಮಾರು ೩೫೦ (೪೫೦-೩೫೦)ಕೋಟಿ ವರ್ಷಗಳಷ್ಟು ಹಿಂದೆಯೇ ಆದಿ ಜೀವಾಂಕುರ ವಾಗಿರ ಬೇಕೆಂದು ಊಹೆ. ಪ್ರೋಟೋ ಕೋಶಗಳು (ಸೆಲ್) ಉಂಟಾಗಲು ಅನುಕೂಲ ಭೌತಿಕ ಜೈವಿಕ ವಾತಾವರಣ ಸೃಷ್ಟಿ ಯಾಯಿತು ೩೯೦ ಕೋಟಿ ವರ್ಷಗಳ ಆಸು-ಪಾಸಿನಲ್ಲಿ ಭೂಮಿಯ ಮೇಲೆ ಉಲ್ಕೆ ಗಳ ಧಾಳಿಗಳಿಂದ ಸತತ ವಾತಾವರಣದ ಏರು ಪೇರಾಗಿ ಜೀವಕೋಶಗಳ ನಿರ್ಮಾಣ ವ್ಯವಸ್ಥೆ ನಾಶವಾದರೂ ಭೂಮಿಯ ಒಳಪದರದ ಜಲಾವರಣದಲ್ಲಿ ಕೆಲವು ಮೈಕ್ರೋಬ್ - ಸೂಕ್ಷ್ಮ ಜೀವ ಧಾತುಗಳು ಉಳಿದಿರಬೇಕು ಎಂದು ಊಹಿಸಲಾಗಿದೆ ೩.ಅತಿಉಷ್ಣ - ೩೫೦,೦೦,೦೦,೦೦೦ ಅಂತ್ಯ ಉಷ್ಣ ಯುಗ. ಭೂಮಿಯ ಮೇಲ್ಪದರ ತಣ್ಣಗಾಗಿ ಗಟ್ಟಿಯಾಯಿತು. ವಾಯು ಮಂಡಲ , ಸಮುದ್ರಗಳು ಉಂಟಾದವು. ಸಮುದ್ರ ತಳದಲ್ಲಿ ಕಬ್ಬಿಣದ ಸಲ್ಫೈಡ್ ಪದರಗಳಾದವು. ಇದರಿಂದ ಆರ್ ಎನ್ ಎ ಗೆ ಬೇಕಾದ ಸಂಯುಕ್ತಗಳಾಗಿರಬಹುದು -ಆದಿ ಜೀವ ಪ್ರೊಕೋರೈಟ್ - -ಆದಿ ಜೀವ ಪ್ರೊಕೋರೈಟ್ ೩೯೦-೨೫೦ ಕೋಟಿ ವರ್ಷಗಳಹಿಂದೆ ಪ್ರೋಕೊ ರೀಅವಟ್ ಗಳೆಂಬ ಆದಿ ಜೀವಕೊಶಗಳು ಉಗಮವಾಗಿರಬೇಕು . ಇವು ಇಂಗಾಲಾಮ್ಲವನ್ನು ಉಪಯೋಸಿ ಆರ‍್ಗ್ಯಾನಿಕ್ ಅಲ್ಲದ ವಸ್ತುಗಳನ್ನು ಆಮ್ಲೀಕರಣ (ಆಕ್ಸಿಡೈಸ್ ) ಮಾಡಿ ಶಕ್ತಿಸಂಚಯ ಮಾಡಿರಬೇಕು. ನಂತರ ಪ್ರೋಕೊರೀಅವಟ್ ಗಳು ರಸಾಯನಿಕ ಕ್ರಿಯೆಯಿಂದ ಗ್ಲೂಕೋಸು ಸಂಯುಕ್ತ ಅಣುಗಳ ರಸಾಯನಿಕ ಬಂಧಗಳ ರಚನೆಮಾಡಿದ್ದು -ಅವು ಸಂಗ್ರಹಗೊಂಡಿರಬೇಕು. ಈ ಗ್ಲೂಕೊಸು ನಂತರದ ಎಲ್ಲಾ ಜೀವ ಕೋಶಗಳಿಗೆ -ಜೀವಿಗಳಿಗೆ ಜೀವಾಧಾರ ಮೂಲವಾಗಿ ಇಂದಿಗೂ ಉಳಿದಿದೆ. ಬಹುತೇಕ ೩೫೦ ಕೋಟಿವರ್ಷಗಳ ಹಿಂದೆಯೇ ಅರ್ಚಿಯಾನ್ ಯುಗದಲ್ಲಿ ಕ್ಲೋರೊಫಿಲ್ ಉಳ್ಳ ಸ್ಯನೊ ಬ್ಯಾಕ್ಟೀರಿಯಾಗಳು ಆದಿಜೀವ ಕಣಗಳಿಂದ ಬೇರೆಯಾಗಿ ರೂಪುಗೊಂಡು ಫೋಟೋಸಿಂತೆಸಿಸ್ ( ದ್ಯುತಿಸಂಸ್ಲೇಷಣೆ) ಮೂಲಕ ಆಹಾರ ಉತ್ಪತ್ತಿ ಮಾಡಿರಬೇಕು ಹೀಗೆ ಜೀವಧಾರಣೆಗೆ ಇಂದಿಗೂ ಬೇಕಾದ ಆಮ್ಲಜನಕದ ಉತ್ಪತ್ತಿ ಆಗಿನಿಂದಲೇ ನೆಡೆದಿರಬೇಕು. ನಂತರ ಅರ್ಚಿಯಾನ್ ಯುಗ : ಮತ್ತು ಅಂತ್ಯ : ://..//Evolution_of_life#Evolution_of_life ://..//The_Blue_Marble# == ಜೀವ ವಿಕಾಸ ಮಹಾಯುಗ == ೧.ಪೂರ್ವ ಪ್ರಾಚೀನ ಯುಗ ೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು ೨.ಮಧ್ಯ ಪ್ರಾಚೀನ ೧೬೦,೦೦,೦೦,೦೦೦ ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು ಮಧ್ಯ ಪ್ರಾಚೀನ ೩.ನವ್ಯ ಪ್ರಾಚೀನ ೧೦೦,೦೦,೦೦,೦೦೦ ಮೃದು ದೇಹದ (ಬೆನ್ನೆಲುಬಿಲ್ಲದವು) ಅ-ಕಶೇರುಕಗಳು ನಾಲ್ಕು ಹಿಮ ಯುಗಗಳಲ್ಲಿ ೬೦ ಕೋಟಿ ವರ್ಷಗಳ ಹಿಂದೆ ಮೊದಲನೇ ಹಿಮ ಯುಗ (೧ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ == ಬೂಸ್ಟುಗಳು == ( , 1,430 ; (542–251 ), - ) ಶಿಲೀಂಧ್ರ ವು ( /ˈfʌŋɡəs/) ಬಹುವಚನ (ಶಿಲೀಂಧ್ರಗಳು) ಯುಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಒಂದು ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್‌ಗಳು (ಕಿಣ್ವ ಬೂಸ್ಟ್‌ಗಳು) ಮತ್ತು ಮೊಲ್ಡ್‌ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಮಶ್ರೂಮ್‌ಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಕಿಂಗ್‌ಡಮ್, ಶಿಲೀಂಧ್ರಗಳು ( /ˈfʌndʒaɪ/ ಅಥವಾ /ˈfʌŋɡaɪ/) ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ. ಶಿಲೀಂಧ್ರ ಕೋಶಗಳು ಸೆಲ್ಯುಲೋಸ್‌ಗಳನ್ನು ಒಳಗೊಂಡಿರುವ ಸಸ್ಯಗಳ ಕೋಶದ ಗೋಡೆಗಳಂತಲ್ಲದೇ, ಕೈಟಿನ್‌ಗಳನ್ನು ಒಳಗೊಂಡಿರುವ ಕೋಶ ಗೋಡೆಗಳನ್ನು ಹೊಂದಿರುತ್ತವೆ ಎಂಬುದು ಒಂದು ಪ್ರಮುಖವಾದ ಭಿನ್ನತೆಯಾಗಿದೆ. ಈ ಭಿನ್ನತೆಗಳು ಮತ್ತು ಇತರ ಭಿನ್ನತೆಗಳು ತೋರಿಸುವುದೇನೆಂದರೆ, ಫಂಗಿಯು ಒಂದು ಸಾಮಾನ್ಯ ಪೂರ್ವಿಕನನ್ನು ಹೊಂದಿರುವ (ಒಂದು ಮೊನೊಪೊಲಿಟಿಕ್ ಗುಂಪು ) ಯುಮೈಕೋಟಾ (ನಿಜವಾದ ಫಂಗಿ ) ಅಥವಾ ಯುಮೈಸೆಟ್ಸ್ ಎಂದು ಕರೆಯಲ್ಪಡುವ ಸಂಬಂಧಿತ ಜೀವಿಗಳ ಒಂದು ಏಕೈಕ ಗುಂಪಿನಿಂದ ತೆಗೆದುಕೊಳ್ಳಲ್ಪಡುತ್ತದೆ. ಸಸ್ಯಗಳ ಗುಂಪಿಗೆ ಸೇರದವವು -ಬೂಸ್ಟು -ಯೀಸ್ಟು ; ೧೪೩ ಕೋಟಿ ವರ್ಷದಿಂ ಸುಮಾರು ೫೦ ಕೋಟಿವರ್ಷಗಳ ಹಿಂದೆ ವಿಕಸಿತವಾದವು []ಈ ಎರಡನೇ ಚಿತ್ರವು- ಅಮಾನಿತ ಕೊಡೆ ಅಣುಬೆ (ಇಂಗ್ಲಿಷ್ ನಲ್ಲಿ ಲಿಂಗ-ಅಣುಬೆ ಎನ್ನುತ್ತಾರೆ)- ವಿಷಕಾರಿ ಅಣುಬೆ ಜಗತ್ತಿನಾದ್ಯಂತ ಕಂಡುಬರುವುದು . == ಜೀವ ವಿಕಾಸ ಯುಗ == 300 -ಪೂರ್ವ ಜೀವ ವಿಕಾಸ ಯುಗ 1) . 2 . 3) . 4)) .5) ೧.ಎರಡನೇ ಹಂತ ೫೪,೫೦,೦೦,೦೦೦ ವರ್ಷಗಳು ಗಟ್ಟಿದೇಹದ ಅ-ಕಶೇರುಕಗಳು ೨.ಧೃಡಜೀವ ಹಂತ ೪೯,೫೦,೦೦,೦೦೦ ವರ್ಷಗಳು ಕಶೇರುಕಗಳು (ಬೆನ್ನೆಲಬಿನ ಪ್ರಾಣಿಗಳು ೩.(ಸೈಲೂರಿಯನ್) *ಸಿಲೂರಿಂ (ಊರು)ಕಾಲ ೪೪,೩೦,೦೦,೦೦೦ ವರ್ಷಗಳು ನಾಳಗಳುಳ್ಳ ಭೂ ಸಸ್ಯಗಳು ಡೇವೊನಿ ಯಾದ ಕಾಲ ೪೧,೭೫,೦೦,೦೦೦ ವರ್ಷಗಳು ಭೂಚರ ಸರೀ ಸೃಪಗಳು ; ಉಸಿರಾಡುವ ಕೀಟಗಳು ಇಂಗಾಲ ವನ ಕಾಲ ೩೫,೪೫,೦೦,೦೦೦ ವರ್ಷಗಳು ನಿಜ (ದೊಡ್ಡ) ಸರೀಸೃಪಗಳು; ಫರ‍್ನಕಾಡುಗಳು. === ಹೊಸ ಶೋಧನೆ === ಮಧ್ಯ ಆಸ್ಟ್ರೇಲಿಯಾದಲ್ಲಿ ಸಿಕ್ಕಿದ ಹಿಮಯುಗ ನಂತರದ ಕಲ್ಲುಗಳನ್ನು ಪುಡಿ ಮಾಡಿ ಅಧ್ಯಯನ ನಡೆಸಲಾಗಿದ್ದು ೨೦೧೭ ರ ಆಗಸ್ಟಿನಲ್ಲಿ ವಿಜ್ಞಾನಿಗಳು ಫಲಿತಾಂಶ ಪ್ರಕಟಿಸಿದ್ದಾರೆ. ಅದರ ಪ್ರಕಾರ, 65 ಕೋಟಿ ವರ್ಷಗಳ ಹಿಂದೆ ಪಾಚಿ ಉತ್ಪತ್ತಿ ಆದ ಅವಧಿಯಲ್ಲೇ ಜೀವಿಗಳ ವಿಕಸನ ಪ್ರಕ್ರಿಯೆಯೂ ಆರಂಭವಾಗಿದೆ. ‘ಭೂಮಿಯ ಇತಿಹಾಸದಲ್ಲಿ, ಮನುಷ್ಯ ಅಥವಾ ಪ್ರಾಣಿಗಳ ಅಸ್ತಿತ್ವವೇ ಇಲ್ಲದಿದ್ದಾಗ ಪಾಚಿಯ ಬೆಳವಣಿಗೆ ಆಗಿದೆ. ಇದು ಪರಿಸರ ವ್ಯವಸ್ಥೆಯಲ್ಲಿ ಉಂಟಾದ ಕ್ರಾಂತಿ ಎಂದು ಈ ಪ್ರಾಚೀನ ಕಲ್ಲುಗಳು ನಮಗೆ ತಿಳಿಸಿವೆ’ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಜೋಷೆನ್ ಬ್ರೊಕ್ಸ್ ಹೇಳಿದ್ದಾರೆ. ‘ಪಾಚಿ ಉತ್ಪತ್ತಿಗೂ ಹಿಂದಿನ ಐದು ಕೋಟಿ ವರ್ಷಗಳಲ್ಲಿ, ಅಂದರೆ ಹಿಮಯುಗದಲ್ಲಿ ನಾಟಕೀಯ ಬೆಳವಣಿಗೆಯೇ ಆಗಿದೆ. ಅತಿಯಾದ ಉಷ್ಣಾಂಶದ ಕಾರಣ ಹಿಮವು ಕರಗಿ ನದಿಗಳಾಗಿ ಹರಿಯಿತು. ಈ ನದಿಗಳು ಪೋಷಕಾಂಶಗಳನ್ನು ಸಾಗರಕ್ಕೆ ಹೊತ್ತು ತಂದವು. ಸಾಗರದ ನೀರಿನಲ್ಲಿ ಪೋಷಕಾಂಶದ ಪ್ರಮಾಣ ಹೆಚ್ಚಿ, ತಾಪಮಾನವೂ ಕಡಿಮೆ ಆದಾಗ ಪಾಚಿಯ ಉತ್ಪತ್ತಿಗೆ ಸೂಕ್ತ ಕಾಲಾವಕಾಶ ಕೂಡಿ ಬಂತು. ಆಗ, ಬ್ಯಾಕ್ಟೀರಿಯಾಗಳೇ ಹೆಚ್ಚಾಗಿರುವ, ಸಾಗರದಲ್ಲಿರುವ ಕಣಗಳು ಭೂಮಿಗೆ ಸ್ಥಳಾಂತರಗೊಂಡವು. ಇದರಿಂದಾಗಿ ಜೀವ ವಿಕಾಸಕ್ಕೆ ಅಗತ್ಯವಿರುವ ಶಕ್ತಿಯು ಆಹಾರ ಜಾಲದಲ್ಲಿ ಹರಡಿಕೊಂಡಿತು. ಪರಿಣಾಮವಾಗಿ ಭೂಮಿಯ ಮೇಲೆ ಮಾನವನನ್ನೂ ಒಳಗೊಂಡು ಬೃಹತ್ ಮತ್ತು ಸಂಕೀರ್ಣ ಜೀವಿಗಳು ಸೃಷ್ಟಿಯಾದವು’ ಎಂಬುದು ಅದರ ಸಿದ್ದಾಂತ. == ದೊಡ್ಡ ಸರೀಸೃಪಗಳು == == ಸಸ್ಯಗಳು == ://..//# == ಪಕ್ಷಿಗಳು == == ಸರೀಸೃಪಗಳು == ಸರೀಸೃಪ == *ಮಧ್ಯ ಜೀವವಿಕಾಸ ಯುಗ == 1) .-2) .-3) . 4) ನಾಲ್ಕು ಹಿಮ ಯುಗಗಳಲ್ಲಿ ೩೦ ಕೋಟಿ ವರ್ಷಗಳ ಹಿಂದೆ ಎರಡನೇ ನೇ ಹಿಮ ಯುಗ (೨ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ ಪರ್ಮಿಯಾದ ಸಸ್ಯಕಾಲ - ೨೯,೦೦,೦೦,೦೦೦ ವರ್ಷಗಳ ಹಿಂದೆ : ಕೋನಿಫರಸ್ ಸಸ್ಯಗಳು ,ಸಸ್ತನಿಗಳನ್ನು ಹೋಲುವ ಸರೀಸೃಪಗಳು ಟ್ರಿಯಾಸಿಕ್ ಶಿಲಾ ರಚನಾ ಕಾಲ ೨೪,೮೨,೦೦,೦೦೦ ವರ್ಷಗಳ ಹಿಂದೆ : ಸಣ್ಣ ಡಿನೋಸಾರುಗಳು; ಸಣ್ಣ ಸಸ್ತನಿಗಳು (ಮೊಲೆ ಹಾಲು ಕುಡಿಸುವ ಪ್ರಾಣಿಗಳು) ಜುರಾಸಿಕ್ ಶಿಲಾ ರಚನಾಕಾಲ * ೨೦,೫೭,೦೦,೦೦೦ ವರ್ಷಗಳ ಹಿಂದೆ : ಪಕ್ಷಿಗಳು ಸುಣ್ಣದ ಶಿಲಾ ರಚನಾ ಕಾಲ ೧೪,೨೦,೦೦,೦೦೦ ವರ್ಷಗಳ ಹಿಂದೆ ಹೂ ಬಿಡುವ ಸಸ್ಯಗಳು, ಗರ್ಭಕೋಶಯುಕ್ತ ಸಸ್ತನಿಗಳು ://..// == ಹೂ ಬಿಡುವ ಸಸ್ಯಗಳು == == ಅರ್ವಾಚೀನ ಯುಗ == ಅರ್ವಾಚೀನ' ವರ್ತಮಾನ ಜೀವ ವಿಕಾಸ ಯುಗ (ಸೀನೋ ಜೊಯಿಕ್) - ಹಿಂದಿನ್ ಟೇಬಲ್ ನಿಂದ ಮುಂದುವರೆದುದು == ಉಪ ತೃತೀಯ ಶಿಲಾಪದರ ಯುಗ. == ದೈತ್ಯ ಪ್ರಾಣಿಗಳು :ಡೈನೋಜಾರ್ ಇತ್ಯಾದಿ: 08/07/2016-ಹೊಸ ಶೋಧನೆ ಡೈನೊಸಾರ್‌ ಸಂತತಿ ಸಾಮೂಹಿಕ ಅಳಿವಿಗೆ ಭಾರತದ ಜ್ವಾಲಾಮುಖಿ ಕಾರಣ! ವಾಷಿಂಗ್ಟನ್‌ ವರದಿಯಂತೆ ಭೂಮಿಯಲ್ಲಿ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳ ಸಂತತಿ ಸಾಮೂಹಿಕವಾಗಿ ಅಳಿಯಲು ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ ಮತ್ತು ಮೆಕ್ಸಿಕೊಗೆ ಅಪ್ಪಳಿದ ಕ್ಷುದ್ರಗ್ರಹ ಕಾರಣ ಎಂಬುದನ್ನು ಹೊಸ ಅಧ್ಯಯನವೊಂದು ಖಚಿತ ಪಡಿಸಿದೆ. ಇತ್ತೀಚೆಗಷ್ಟೇ ಅಭಿವೃದ್ಧಿ ಪಡಿಸಲಾಗಿರುವ ‘ಕಾರ್ಬೊನೇಟ್‌ ಕ್ಲಂಪ್ಡ್‌ ಐಸೊಟೋಪ್‌ ಪ್ಯಾಲಿಯೊ ಥರ್ಮೋಮೀಟರ್‌’ ಎಂಬ ಹೊಸ ವಿಧಾನದ ಮೂಲಕ ಅಮೆರಿಕದ ಫ್ಲಾರಿಡಾ ವಿಶ್ವವಿದ್ಯಾಲಯದ ಆ್ಯಂಡ್ರಿಯಾ ಡಟ್ಟನ್‌ ಅವರು ಮಿಚಿಗನ್‌ ವಿಶ್ವವಿದ್ಯಾಲಯದ ಸಹೋದ್ಯೋಗಿಗಳ ನೆರವಿನಿಂದ ಈ ಅಧ್ಯಯನ ನಡೆಸಿದ್ದರು. ಈ ವಿಧಾನವನ್ನು ಬಳಸಿಕೊಂಡು ಪ್ರಾಚೀನ ಕಾಲದಲ್ಲಿದ್ದ ಅಂಟಾರ್ಕ್ಟಿಕಾ ಸಾಗರದ ಉಷ್ಣಾಂಶವನ್ನು ಪುನರ್‌ ಸೃಷ್ಟಿಸಲು ಅಧ್ಯಯನಕಾರರು ಯಶಸ್ವಿಯಾಗಿದ್ದಾರೆ. ಅಧ್ಯಯನದ ಭಾಗವಾಗಿ ಅಂಟಾರ್ಕ್ಟಿಕಾ ಸಾಗರದಲ್ಲಿರುವ ಸೆಮೋರ್‌ ದ್ವೀಪದಲ್ಲಿ ಪತ್ತೆಯಾಗಿದ್ದ ಮೃದ್ವಂಗಿಗಳ ಪಳೆಯುಳಿಕೆಗಳ 29 ಕೋಶಗಳಲ್ಲಿದ್ದ ರಾಸಾಯನಿಕ ಸಂಯೋಜನೆಗಳನ್ನು ವಿಶ್ಲೇಷಿಸಿದ್ದಾರೆ. ‘ಪ್ರಾಚೀನ ಸಾಗರದ ಉಷ್ಣಾಂಶ 14 ಡಿಗ್ರಿ ಫ್ಯಾರನ್‌ಹೀಟ್‌ನಷ್ಟು (ಕಛಟ ಟ–10 ಡಿಗ್ರಿ ಸೆಲ್ಸಿಯಸ್‌) ಹೆಚ್ಚಾಗಿದ್ದು ಅಧ್ಯಯನದಿಂದ ತಿಳಿದು ಬಂದಿದೆ. ಇದು ಕ್ರಿಟೇಷಿಯ ಅವಧಿ (ಮಧ್ಯಜೀವಿ ಕಲ್ಪದ ಉತ್ತರಾರ್ಧ) ಅಂತ್ಯದ ವೇಳೆಗೆ ಸಂಭವಿಸಿದ, ಭೂಮಿಯ ಉಷ್ಣಾಂಶವನ್ನು ಹೆಚ್ಚಿಸಿದ ಎರಡು ಘಟನೆಗಳಿಗೆ ಸಂಬಂಧ ಕಲ್ಪಿಸುತ್ತದೆ’ ಎಂದು ಅಧ್ಯಯನಕಾರರು ಹೇಳಿದ್ದಾರೆ. ‘ಒಂದು, ಭಾರತದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟ; ಮತ್ತೊಂದು ಮೆಕ್ಸಿಕೊದ ಯುಕಟನ್‌ ದ್ವೀಪಕಲ್ಪಕ್ಕೆ ಕ್ಷುದ್ರಗ್ರಹ ಅಥವಾ ಧೂಮಕೇತು ಅಪ್ಪಳಿಸಿದ ಘಟನೆ’ ಎಂದು ಅವರು ವಿವರಿಸಿದ್ದಾರೆ. ಕ್ರಿಟೇಷಿಯ ಅವಧಿ ಅಂತ್ಯ ಮತ್ತು ಪ್ರಾಚೀನ ಶಿಲಾಯುಗದ ಆರಂಭ ಅವಧಿ ಅಂದರೆ 6.6 ಕೋಟಿ ವರ್ಷಗಳ ಹಿಂದೆ ಡೈನೊಸಾರ್‌ಗಳು ಸಾಮೂಹಿಕವಾಗಿ ನಾಶ ಹೊಂದಿವೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಭೂಮಿಯಲ್ಲಿ ಇರಿಡಿಯಂ (ಪ್ಲಾಟಿನಂ ಬಳಗದ ರಾಸಾಯನಿಕ ಮೂಲವಸ್ತು) ಅಂಶ ಇತ್ತು ಎಂಬುದನ್ನು ವಿಜ್ಞಾನಿಗಳು ತೋರಿಸಿದ್ದಾರೆ. ಇದೇ ಇರಿಡಿಯಂ ಆಕಾಶಕಾಯಗಳಾದ ಕ್ಷುದ್ರಗ್ರಹ, ಉಲ್ಕೆಗಳು ಮತ್ತು ಧೂಮಕೇತುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.ಕ್ರಿಟೇಷಿಯ ಅವಧಿಯಲ್ಲಿದ್ದ ಜೀವಿಗಳೆಲ್ಲ ಕ್ಷುದ್ರಗ್ರಹದ ಅಪ್ಪಳಿಸುವಿಕೆಯಿಂದ ನಾಶ ಹೊಂದಿದ್ದವು ಎಂಬ ವಾದಕ್ಕೆ ಇದು ಮತ್ತಷ್ಟು ಪುಷ್ಟಿ ನೀಡುತ್ತದೆ. ಆಧಾರ:ಪ್ರಜಾವಾಣಿ:08/07/2016 [೧] 2016-07-08 ವೇಬ್ಯಾಕ್ ಮೆಷಿನ್ ನಲ್ಲಿ. == ಡೈನೊಸಾರದ ಹೆಜ್ಜೆ == 4 ವರ್ಷದ ಹುಡುಗಿ ಯುಕೆ ಯ ಕಡಲತೀರದಲ್ಲಿ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಡೈನೋಸಾರ್ ಹೆಜ್ಜೆಗುರುತನ್ನು ಕಂಡುಹಿಡಿದಳು;(ಜನವರಿ 31, 2021) ದಕ್ಷಿಣ ವೇಲ್ಸ್‌ನ ಬ್ಯಾರಿ ಬಳಿಯ ಕಡಲತೀರದಲ್ಲಿ 220 ದಶಲಕ್ಷ ವರ್ಷಗಳಷ್ಟು ಹಳೆಯದಾದ ಹೆಜ್ಜೆಗುರುತು ಕಂಡುಬಂದಿದೆ. 4-- - ;; ; 31, 2021 ;; 220--- . == , == ? ಜೀವ ವಿಕಾಸದ ಕಾಲ ೬,೫೦,೦೦,೦೦೦ ವರ್ಷಗಳು - ಗೊರಸಿನ ಸಸ್ತನಿಗಳು ಜೀವ ವಿಕಾಸದ ಕಾಲ ೫,೪೮,೦೦,೦೦೦ ವರ್ಷಗಳು - ಜಲಚರಗಳು ಕಾರ್ನಿವೊರ ಸಸ್ತನಿಗಳು ಜೀವ ವಿಕಾಸದ ಕಾಲ ೩,೩೭,೦೦,೦೦೦ ವರ್ಷಗಳು -ಆಧುನಿಕ ಮೂಲಜೀವಿಗಳ ಮೊದಲ ಪೀಳಿಗೆ ೨,೩೮,೦೦,೦೦೦ ವರ್ಷಗಳು ಮುಂದುವರಿದ ಜೀವಿಗಳು == ದೊಡ್ಡ ಸಸ್ತನಿಗಳು == - - == ಅಧಿಕ ಜೀವ ವಿಕಾಸ ಕಾಲ == ಜೀವ ವಿಕಾಸ ೨,೩೮,೦೦,೦೦೦ವರ್ಷಗಳು - ಮುಂದುವರಿದ ಜೀವಿಗಳು ಜೀವ ವಿಕಾಸ ೫೩,೦೦,೦೦೦ ವರ್ಷಗಳು - ವಾನರರು (ಕಪಿರೂಪಿ ನರರು) ಮಾನವನ ವಿಕಾಸ ಕಾಲ ಸೂಚಿ ನಾಲ್ಕು ಹಿಮ ಯುಗಗಳಲ್ಲಿ ೧.೬ ಕೋಟಿ ವರ್ಷಗಳ ಹಿಂದೆ ಮೋರನೇ ಹಿಮ ಯುಗ (೩ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ == 2)ಉಪಚಾತುರ್ಥ ಉಪಯುಗ == ) . ಸಮೃದ್ಧ ಜೀವ ವಿಕಾಸ ಕಾಲ ಜೀವ ವಿಕಾಸ ೧೮,೦೦,೦೦೦ ವರ್ಷಗಳು - ಮಾನವರು (ಅನಾಗರಿಕರು) ಪ್ರಾಚೀನ ಶಿಲಾಯುಗ ಮಾನವನ ವಿಕಾಸ ನಾಲ್ಕು ಹಿಮ ಯುಗಗಳಲ್ಲಿ ೧೦ ಸಾವಿರ ವರ್ಷಗಳ ಹಿಂದೆ ನಾಲ್ಕನೇ ನೇ ಹಿಮ ಯುಗ (೪ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ; ಅದು ಇನ್ನೂ ಮುಂದುವರೆದಿದೆ ಎಂದು ಭಾವಿಸಲಾಗಿದೆ. ಉತ್ತರ- ದಕ್ಷಿಣ ದೃವಗಳ ಹಿಮ ರಾಶಿ ಅದರ ಪರಿಣಾಮವೆಂದೂ, ದೈತ್ಯ ಜೀವಿಗಳ ಅಂತ್ಯಕ್ಕೆ ಅದೇ ಕಾರಣ ವಿರಬೇಕೆಂದೂ ಊಹಿಸಿದ್ದಾರೆ. ಜೀವ ವಿಕಾಸ ೧೦,೦೦೦ ವರ್ಷಗಳು - ನಾಗರಿಕ ಮಾನವರು -(ಆಧುನಿಕ ಮಾನವರು). == ಪ್ರಾಚೀನ ಶಿಲಾಯುಗದ ಕಾಲ್ಪನಿಕ ಚಿತ್ರ == ಸುಮಾರು 108,000 ಮತ್ತು 117,000 ವರ್ಷಗಳ ಹಿಂದೆ,ಮೊದಲ ಬಗ್ಗಿದ ಸೊಂಟದ ಮಾನವರು ನೆಟ್ಟಗೆ ನಡೆಯುವ ನಿಲುವನ್ನು ತಮ್ಮ ಕೊನೆಯ ಪ್ರಯತ್ನದಲ್ಲಿ ಆರಂಭಿಸಿದರು. ಇಂಡೋನೇಷ್ಯಾದ ಸೆಂಟ್ರಲ್ ಜಾವಾದಲ್ಲಿ ಹೋಮೋ ಎರೆಕ್ಟಸ್‌ನ ಕಿರಿಯ ಪಳೆಯುಳಿಕೆಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ, ಇದು ಆಧುನಿಕ ಮಾನವರು ವಿಕಾಸಗೊಳ್ಳುವ ಮೊದಲು ಅಳಿದುಹೋದ ಪ್ರಾಚೀನ ಮಾನವ ಪ್ರಭೇದವಾಗಿದೆ. ಮಾನವ ತಳಿಗಳು ಯಾವಾಗ ಅಳಿದುಹೋದರೆಂಬುದನ್ನು ಅವರ ಸಂಶೋಧನೆಗಳು ಖಚಿತಪಡಿಸುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. == ೪/೫ ಸಾವಿರ ವರ್ಷಗಳ ಹಿಂದೆ ಹವಾಮಾನ ವೈಪರೀತ್ಯದಿಂದ ಪ್ರಳಯ == == ಆಧಾರ == ಇಂಗ್ಲಿಷ್ ವಿಕಿಪೀಡಿಯಾ: ; ಜೀವ ವಿಕಸನದ ವಿಭಾಗ ಫೈಲುಗಳು. ://..//Geologic_time_scale ://..// ವಿವಿಧ ಲೇಖನಗಳು ಆರ್ಡಿಪಿಥೆಕಸ್ | ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ ಆಸ್ತ್ರೇಲೋಪಿಥಿಕಸ್ ಅಪೆರೆನ್ಸಸ್:: ಮಾನವನ ವಿಕಾಸ/ chartಕಾಲ ಸೂಚಿ == ಹೆಚ್ಚಿನ ಓದಿಗೆ == ಪೃಥ್ವಿ ದತ್ತ ಚಂದ್ರ ಶೋಭಿ;ಪ್ರಭಾವಿ ಇತಿಹಾಸ ಪುಸ್ತಕವೊಂದರ ಸುತ್ತ...;14 , 2017::ಹರಾರಿ ತಮಗೆ ದೊರಕಿದ ಹೊಸ ಜವಾಬ್ದಾರಿಗೆ ಪ್ರತಿಕ್ರಿಯಿಸಿದ ರೀತಿ ತುಂಬ ವಿಭಿನ್ನವಾಗಿತ್ತು. ಕಳೆದ 25 ಲಕ್ಷ ವರ್ಷಗಳ ಮಾನವತೆಯ ಇತಿಹಾಸ, ಕಳೆದ 70,000 ವರ್ಷಗಳಲ್ಲಿ ವಿವಿಧ ಮಾನವ ವರ್ಗಗಳು (ಸ್ಪೀಷೀಸ್) ಭೂಮಿಯ ಪರಿಸರದ ಮೇಲೆ ತಮ್ಮ ನಿಯಂತ್ರಣ ಸ್ಥಾಪಿಸಿದ ಬಗೆ, ಕಳೆದ 10,000 ವರ್ಷಗಳಲ್ಲಿ ಉಳಿದುಬಂದಿರುವ ಏಕೈಕ ಮಾನವ ವರ್ಗವಾದ ಸೇಪಿಯನ್ನರ ಯಶಸ್ಸಿನ ಕಾರಣ ಮತ್ತು ಕಡೆಗೆ ಮಾನವತೆಯ ಭವಿಷ್ಯವನ್ನು ಹರಾರಿ ತಮ್ಮ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡರು. ಇದರೆ ಬಗ್ಗೆ ಕೆಲವು ವರ್ಷಗಳ ಕಾಲ ಪಾಠ ಮಾಡುತ್ತ, ಹೀಬ್ರೂ ಭಾಷೆಯಲ್ಲಿ ಕೃತಿಯೊಂದನ್ನು ಸಹ 2011ರಲ್ಲಿ ರಚಿಸಿದರು. 2017-04-17 ವೇಬ್ಯಾಕ್ ಮೆಷಿನ್ ನಲ್ಲಿ. == ನೋಡಿ == ಮಾನವನ ವಿಕಾಸ ಕಾಲ ಸೂಚಿ ಸೃಷ್ಟಿ ಮತ್ತು ಪುರಾಣ ಸೃಷ್ಟಿ ಮತ್ತು ವಿಜ್ಞಾನ ಮಾನವ ವಿಕಾಸ ಭೂವೈಜ್ಞಾನಿಕ ಕಾಲ -ಕಲ್ಪಗಳು ಜೀವ ವಿಕಾಸವಾದ ಭೂರಚನಶಾಸ್ತ್ರ ಶ್ವೇತವರ್ಣ ಪೀಳಿಗೆ - ಕಾಕೇಸಿಯನ್ ಪೀಳಿಗೆ == ಉಲ್ಲೇಖಗಳು == == ಉಲ್ಲೇಖ ==